ಮಹಾಪದ್ಮನಂದ
ಕ್ರಿ.ಪೂ. ಸು. 4ನೆಯ ಶತಮಾನ, ಮಗಧದ ನಂದ ವಂಶದ ಸ್ಥಾಪಕ. ಶಿಶುನಾಗ ಸಂತತಿಯ ಕೊನೆಯ ಅರಸ. ಕಾಲಾಶೋಕ ಅಥವಾ ಕಾಕವರ್ಣಿ ಶಿಶುನಾಗ ಎಂಬುವನನ್ನು ಕೊಂದು ಅಧಿಕಾರಕ್ಕೆ ಬಂದ. ಕ್ರಿ.ಪೂ. 364ರಲ್ಲಿ ಈತ ತನ್ನ ಆಳ್ವಿಕೆಯನ್ನು ಆರಂಭಿಸಿರಬಹುದೆಂಬುದು ವಿದ್ವಾಂಸರ ಅಭಿಪ್ರಾಯ. ಪರಾಕ್ರಮಿಯಾದ ಈತ ಅನೇಕ ಕ್ಪತ್ರಿಯರನ್ನು ಸೋಲಿಸಿ ಮಗಧ ಸಾಮ್ರಾಜ್ಯವನ್ನು ವಿಸ್ತರಿಸಿದ. ವಿಸ್ತಾರವಾದ ಸಾಮ್ರಾಜ್ಯವನ್ನು ಸಮರ್ಪಕವಾಗಿ ಆಳಿದ. ಪುರಾಣಗಳಲ್ಲಿ ಮಹಾಪದ್ಮನಂದನನ್ನು ಕ್ಪತ್ರಿಯಕುಲಾಂತಕನೆಂದೂ ಎರಡನೆಯ ಪರಶುರಾಮನೆಂದೂ ವರ್ಣಿಸಲಾಗಿದೆ. ಹಲವು ಚರಿತ್ರೆಕಾರರು ಈತನನ್ನು ಮಗಧ ಸಾಮ್ರಾಜ್ಯದ ಮೊತ್ತಮೊದಲ ಐತಿಹಾಸಿಕ ಸಾರ್ವಭೌಮನೆಂದು ಕರೆದಿದ್ದಾರೆ. 																		
(ಜಿ. ಆರ್. ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ